Wednesday, August 28, 2013

ಬೆಳಕೆಂದರೇನು? ಬೆಳಕಿನ ನಿಜ ರೂಪವೇನು?

ಬೆಳಕೆಂದರೇನು? ಬೆಳಕಿನ ನಿಜ ರೂಪವೇನು? 
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ 

ವಿದ್ಯುತ್ - ಆಯಸ್ ಕಾಂತಗಳ ಪರಸ್ಪರ ಸ್ಪಂದನದಾಟ; ಆಡುತ್ತಾ ಅದ್ಭುತ ಓಟ. 
ವಿದ್ಯುತ್ ಕಾಂತವು ಅಲೆಯಲೆಯಾಗಿ ಸ್ಪಂದನದ ಏರಿಳಿತದಲ್ಲಿ ಕುಣಿಯುಯಾಗ, 
ಅಯಸ್ಕಾಂತವು ವಿದ್ಯುತ್ಕಾಂತದ ಏರಿಳಿತಕ್ಕೆ ಅನುಸ್ಪಂದಿಸುತ್ತದೆ. ಈ ಅನುಸ್ಪಂದವು ವಿದ್ಯುತ್ತಿನ ಕಾಂತವು ಇಳಿಯುವಾಗ ಅಯಸ್ಕಾಂತವು ಎರಿನ ದಿಶೆಯಲ್ಲಿ ಇರ್ರುತ್ತದೆ. ಒಂದು ಏರುವಾಗ ಇನ್ನೊಂದು ಇಳಿದು ಯಾತಾ ಯಾತ ಕ್ರೀಡೆಗಳಾಡುತ್ತಾ ಒಂದರ ಜೊತೆಗೆ ಇನ್ನೊಂದು ವ್ಯತಿರಿಕ್ತದಾಟದಲ್ಲಿ ಓಡುತ್ತವೆ. 

ಸ್ಪಂದನದ ವ್ಯಾಯಾಮವನ್ನು ಮಾಡುತ್ತಿದ್ದರೂ, ಅದರ ಆಯಾಮ ಬೇರೆ ಬೇರೆ ಯಾದಾಗ ನಮ್ಮ ಕಣ್ಣಿಗೆ ಬೇರೆ ಬೇರೆ ಬಣ್ಣಗಳಾಗಿ ವ್ಯಕ್ಯಗೊಳ್ಳುತ್ತದೆ. ಬೆಳ್ಳನೆಯ ಬೆಳಕಿನಲ್ಲಿ ಎಲ್ಲ ಬಣ್ಣಗಳಿದ್ದರೂ, ಆ ಸಮಗ್ರ ಬಣ್ಣವು ತಾನು ಬೀಳುವ ವಸ್ತುಗಳ ಭೌತಗುಣಕ್ಕೆ ತಕ್ಕಂತೆ ಕೆಲವೇ ಬಣ್ಣಗಳು ಪ್ರತಿಫಲಿಸಬಹುದು. ಆಗ ಪ್ರತಿಫಲಿಸಿದ ಬಣ್ಣಗಳಾಗಿ ಆ ವಸ್ತುವು ಕಾಣಿಸಿಕೊಳ್ಳುತ್ತದೆ. 

ನ್ಯಾನೋ ಎಂದರೆ ಎಷ್ಟು?

ನ್ಯಾನೋ ಎಂದರೆ ಎಷ್ಟು?
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ 


ಚಿನ್ನದ ಬಣ್ಣ ಎಲ್ಲರಿಗೂ ಗೊತ್ತು. ಬಡವರಾದರೇನು, ಶ್ರೀಮಂತರಾದರೇನು, ಬಂಗಾರದ ಬಣ್ಣವು ಎಲ್ಲ ಮಾನವರಿಗೂ ಒಂದೇ ತರಹ ಕಾಣಿಸುತ್ತದೆ. 

ಆದರೆ, ಚಿನ್ನವನ್ನು ಅತಿ ಸಣ್ಣ ಕಣಗಳಾಗಿ ಮಾಡಿದಾಗ ನಮ್ಮ ಕಣ್ಣಿಗೆ ಬೇರೆಯ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತದೆ. ಚಿನ್ನದ ಕಣದ ಆಕಾರ, ಗಾತ್ರ ಬೇರೆ - ಬೇರೆ ಯಾದಾಗ ಬೇರೆ ಬಣ್ಣಗಳಲ್ಲಿ ನಮ್ಮ ಕಣ್ಣಿಗೆ ಕಾಣುತ್ತದೆ. ಉದಾಹರಣೆಗೆ, ನೀಲಿ, ಹಳದಿ ಇತ್ಯಾದಿ ಬಣ್ಣಗಳಲ್ಲಿ ಚಿನ್ನವು ನಮ್ಮ ಕಣ್ಣಿಗೆ ಕಾಣಿಸುತ್ತದೆ. ಈ ರೀತಿಯ ವ್ಯಕ್ತತೆಯು ನ್ಯಾನೋ ಗಾತ್ರ ಪ್ರಮಾಣದಲ್ಲಿ ವಿಶಿಷ್ಟ ಮತ್ತು ವಿಚಿತ್ರ. 

ನ್ಯಾನೋ ಲೋಕ ವಿಚಿತ್ರಕ್ಕೆ ಇಂಗಾಲದ ನ್ಯಾನೋ ಕೊಳವೆ ಇನ್ನೊಂದು ಉದಾಹರಣೆ. ಇದು ಇಂಗಾಲದ ಒಂದು ಬಹಳ ತೆಳುವಾದ ಹಾಳೆಯನ್ನು ಕೊಳವೆಯಾಗಿ ಸುತ್ತಿದರೆ ಇರುವ ಹಾಗಿರುತ್ತದೆ. ಈ ಕೊಳವೆಯ ಉದ್ದ ಸುಮಾರು ನೂರು ನ್ಯಾನೋ ಮೀಟರು. ಕೊಳವೆಯ ಸುತ್ತಳತೆಯು ಸುಮಾರು ಹತ್ತರಿಂದ ಒಪ್ಪತ್ತು ನ್ಯಾನೋ ಮೀಟರು ಇರಬಹುದು. ನಮ್ಮ ಕಣ್ಣಿಗೆ ಇದು ಇದ್ದಲಿನ ಧೂಳಿ ನಂತೆ ಕಾಣಬರುತ್ತದೆ. ಆದರೆ, ಈ ಕೊಳವೆಯ ಭೌತ ಗುಣಗಳನ್ನು ಪರೀಕ್ಷಿಸಿದರೆ "ವಜ್ರ ದೇಹಿ" ಎಂದು ಹೆಸರನ್ನು ಕೊಡಬಹುದೇನೋ!

ಈ ಇಂಗಾಲದ ನ್ಯಾನೋ ಕೊಳವೆಗಳನ್ನು ಒಂದು ಕಾರಿನ ಪೈಂಟು ಬಣ್ಣಕ್ಕೆ ಬೆರೆಸಿ ಹಚ್ಚಿದರೆ, ಒಂದು ದೊಡ್ದ ಸುತ್ತಿಗೆಯನ್ನು ಉಪಯೋಗಿಸಿ ಬಲವಾಗಿ ಹೊಡೆದರೂ, ಸುತ್ತಿಗೆಯೇ ರಬ್ಬರಿನ ಚೆಂಡು ಸೆಟೆದು ಪುಟ ಏಳುವ ಹಾಗೆ ವಾಪಸ್ಸು ಚಿಮ್ಮುತ್ತದೆಯೇ ಹೊರತು, ಕಾರಿಗೆ ಏನೂ ಅಪಾಯವಾಗಿರುವುದಿಲ್ಲ. ಇದೊಂದೇ ಅಲ್ಲ, ಈ ನ್ಯಾನೋ ಕೊಳವೆಯ ಮಹತ್ತು ಬಹು ಮುಖ. ಇದು ತಾಮ್ರ ಮತ್ತು ಬೆಳ್ಳಿ ಗಳಿಗಿಂತ ಅತಿ ಹೆಚ್ಚಿನ ಶಾಖ ವಾಹಕ ಮತ್ತು ವಿದ್ಯುತ್ ವಾಹಕ. ವಜ್ರ ಸಮಾನ ಕಠಿಣತೆಗೋ ಈ ಇಂಗಾಲದ ನ್ಯಾನೋ ಕೊಳವೆಗಳು ಬಹಳ ಪ್ರಸಿಧ್ಧ. 

ನ್ಯಾನೋ ಲೋಕವೇ ಬೇರೆಯ ರೀತಿಯಲ್ಲಿ ಇದೆ. ಪುರಾಣದಲ್ಲಿ, ಕವಿಗಳ ಕಲ್ಪನಾ ಲೋಕದಲ್ಲಿ ಮೂರು ಲೋಕಗಳನ್ನು ನಾವು ಕೇಳಿದ್ದೇವೆ. ಭೂಮಿ, ಆಕಾಶ, ಪಾತಾಳ ಗಳ ಜೊತೆಗೆ ನ್ಯಾನೋ ಲೋಕವು ತನ್ನದೇ ಆದ ಭೌತ ಲೋಕ. 

ಒಂದು ಮೀಟರಿನಲ್ಲಿ ನೂರು ಸೆಂಟಿ ಮೀಟರುಗಳಿರುತ್ತವೆ; ಅಥವಾ, ಒಂದು ಮೀಟರನ್ನು ನೂರು ಸಮ ಭಾಗಗಳಾಗಿ ಮಾಡಿದಾಗ ನೂರರಲ್ಲಿ ಒಂದೊಂದು ಭಾಗವೂ ಸೆಂಟಿ ಮೀಟರುಗಳಿರುತ್ತವೆ. ಸೆಂಟಿ ಅಂದರೆ ನೂರರಲ್ಲಿ ಒಂದು ಬಾಗ ಎಂದರ್ಥ. 

ಮಿಲಿ ಮೀಟರು ಎಂದರೆ ಮೀಟರಿನಲ್ಲಿ ಸಾವಿರದ ಒಂದು ಭಾಗ. ಸಾವಿರವನ್ನು ಬರೆಯುವಾಗ ಒಂದು ಬರೆದು ಮೂರು ಸೊನ್ನೆಗಳನ್ನು ಬರೆಯುತ್ತೇವೆ. ಹಾಗೆಯೇ ಇಲ್ಲಿ ನಾವು ಭಾಗ ಮಾಡುತ್ತಿರುವುದರಿಂದ ದಶಕ ಬಿಂದುವನ್ನು ಬರೆದು ನಂತರದಲ್ಲಿ, ಮೂರು ಸ್ಥಾನಗಳಷ್ಟು ತೋರಿಸಬೇಕು. ಮೈಕ್ರೋ ಮೀಟರು ಅಂದರೆ ಮಿಲಿಮೀಟರಿನಲ್ಲಿ ಸಾವಿರದ ಒಂದು ಭಾಗ. ಇಲ್ಲಿ ನಾವು ಭಾಗ ಮಾಡುತ್ತಿರುವುದರಿಂದ ದಶಕ ಬಿಂದುವನ್ನು ಬರೆದು ನಂತರದಲ್ಲಿ, ಆರು ಸ್ಥಾನಗಳಷ್ಟು ತೋರಿಸಬೇಕು.

ನ್ಯಾನೋ ಎಂದರೆ ಮೈಕ್ರೋದಲ್ಲಿ ಒಂದು ಸಾವಿರದ ಭಾಗ. ನ್ಯಾನೋ ಬರೆಯುವಾಗ ದಶಕ ಬಿಂದುವಾದ ನಂತರ ಒಂಬತ್ತು ಸ್ಥಾನಗಳಿರಬೇಕು. 

ಕೃಷ್ಣಾ! ನೀ ಮತ್ತೆ ಹುಟ್ಟಿ ಬರುವುದಾದರೆ ....

ಕೃಷ್ಣಾ! ನೀ ಮತ್ತೆ ಹುಟ್ಟಿ ಬರುವುದಾದರೆ .... 

ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

Composed on the occasion of Krishna Janma AshTami August 28, 2013

ಹುಟ್ಟು ಬಾರೋ, ಸುಂದರ ಅವತಾರಿ ನೀನಿರಬಹುದು
ಪುಟ್ಟ ಕಂದನಾಗಿ ಸಾಕು ಮನೆ ಮನೆಗಳಲಿ ನೀ ಬಂದು

ದೇವಕಿಗೆ ತಂದೆ ಭಾಗ್ಯ, ಯಶೋಧೆಗೆ ಅಪಾರ ಆನಂದ
ದೇವ ಲೋಕದ ಸುನಾದದಿ ಕೊಳಲ ಗಾನದ ಗೋವಿಂದ

ಕನ್ಯೆಯರ ಕುಣಿಸಿದೆ ವೇಣುಗಾನದ ಸಂವೇದದ ಲಯಕೆ
ಅನ್ಯ ಸುಂದರಿಯರ ತನು ಮನಕೂ ಏರಿಸಿದೆ ಲವಲವಿಕೆ

ರಾಧೆಗೆ ಪ್ರೇಮ ಪೂರೈಸಿ, ರುಕ್ಮಿಣಿಗೆ ಹಾರ ಹಾಕಿದೆಯಲ್ಲಾ
ಮಧುಸೂಧನ ಆದೆ, ಮಧುರತೆಯ ಸಿಂಚನ ಭಕ್ತರಿಗೆಲ್ಲಾ

ಪಾಂಡವರ ಪಕ್ಷಪಾತಿ ನೀನಾಗಿದ್ದು, ಅಭಯ ದ್ರೌಪದಿಗೆ
ಗಾಂಡೀವಿಯನು ಗೆಲಿಸಿದೆ ಭಾರತ ಸಮರದಿ ಸಖನಾಗಿ

ಭಗವದ್ಗೀತೆ ನರನಿಗೆ; ಅದೇ ಉಪದೇಶ ನರ ಕುಲಕೆಲ್ಲಾ
ಯೋಗಿ ವ್ಯಾಸರ ನಾಲಗೆಯಲ್ಲಿ ಕುಣಿದು ಹಾಡಿದೆಯಲ್ಲಾ

ಮತ್ತೆ ಬರುವಾಗ, ಬರಬೇಕು ನಂದನ ಭಾರತದಲೆಲ್ಲಾ
ಹೆತ್ತ ಅಮ್ಮಂದಿರಿಗೆಲ್ಲಾ ಬಲು ತುಂಟಾಟ ಆಡಬೇಕಲ್ಲಾ

ಅಕ್ಕ ತಂಗಿಯರಿಗೆ ಅಭಯ ಮಾತ್ರ ನೀಡಲೇ ಬೇಕಪ್ಪಾ
ರೊಕ್ಕದ ರಾಣಿ ಲಕುಮಿಯು ಕೈ ಧನ ಸುರಿಯ ಹೇಳಪ್ಪಾ

ಪಾಂಡವರೂ ಬೇಡ; ಕೌರವರಂತೂ ಬೇಡವೇ ಬೇಡಲೋ
ಪುಂಡರ ಕಾಟ, ದಾಳಗಳ ಆಟ, ಹುಚ್ಚು ವನವಾಸವೆಲ್ಲಾ

ನೀರೆಯರ ಸೀರೆಗಳು ಸರಿಸೆರಗು ಭಾರತಿಯ ಮಗಳಿಗೆ
ಕರುನಾಡಿಗೆ ಕರುಣಿಸು ನಂದನ ವನದ ಆನಂದದ ಪೀಳಿಗೆ

ದ್ವಾಪಾರವೂ ಬೇಡ; ಬೇಡ ಅವತಾರ ಎತ್ತಿ ಸಂಹಾರಗಳು
ಅಪ್ಪ ಅಪ್ಪಂದಿರಿಗೆ ಸಾಕು ಬೆಳೆಯುತಿರೆ ಚೆಲುವಂತ ಮಕ್ಕಳು

ಕೊಳಲು ಮಾತ್ರ ಮರೆಯ ಬೇಡ; ತುಳಸಿ ಬೇಕು ಅಂಗಳಕೆಲ್ಲ
ಕೊಲುವ ಚಕ್ರ ತರಲೇ ಬೇಡ; ನಿನ್ನ ನಗು ಮುಖ ಬೇಕೇ ಬೇಕಲ್ಲ